ಚಿಕ್ಕಮಗಳೂರು: ಕಾಫಿನಾಡಿನ ಸುಪ್ರಸಿದ್ಧ ಹಿಂದೂ ಮಹಾ ಗಣಪತಿ ವಿಸರ್ಜನಾ ಮೆರವಣಿಗೆಗೆ ಅದ್ಧೂರಿಯಾಗಿ ಚಾಲನೆ ನೀಡಲಾಗಿದ್ದು, ರಾತ್ರಿ ಒಂದು ಗಂಟೆ ಸುಮಾರಿಗೆ ಗಣೇಶನನ್ನು ವಿಸರ್ಜನೆ ಮಾಡಲಾಗಿತು. ಚಿಕ್ಕಮಗಳೂರು ನಗರದಲ್ಲಿ ಕಳೆದ 10 ವರ್ಷಗಳಿಂದ ಹಿಂದೂ ಮಹಾಮಹಾ ಗಣಪತಿಯನ್ನು ಸಂಸ್ಕಾರದ ಸೇವಾ ಮೆರವಣಿಗೆಯಲ್ಲಿ ಪ್ರತಿಷ್ಠಾಪಿಸಲಾಗುತ್ತಿದೆ. ಮೆರವಣಿಗೆಯುದ್ದಕ್ಕೂ ಕಾಫಿನಾಡಿನ ವ್ಯಕ್ತಿಗಳು ಗಣೇಶನಿಗೆ ಪ್ರೀತಿಯಿಂದ ಮಹಾ ಪೂಜೆ ಮಂಗಳಾರತಿ ಮತ್ತು ಕುಣಿದು ಕುಪ್ಪಳಿಸಿ ಲಂಬೋದರರನ್ನು ಅರ್ಪಿಸಿದರು.
ಬಸವನಹಳ್ಳಿ ಓಂಕಾರೇಶ್ವರ ದೇವಸ್ಥಾನದಿಂದ ಹೊರಟ ಮೆರವಣಿಗೆ ಆಶೀರ್ವಾದ ಸರ್ಕಲ್, ವಿಜಯಪುರ ಮುಖ್ಯ ರಸ್ತೆ, ಮಲ್ಲಂದೂರು ರಸ್ತೆ, ಉಪ್ಪಳ್ಳಿ ವೃತ್ತದ ವರೆಗೆ ತೆರಳಿ ಹಿಂದಿರುಗಿ ಬಂದು ಐಜಿ ರಸ್ತೆ, ರಾಘವೇಂದ್ರ ಸ್ವಾಮಿ ಮಠದ ರಸ್ತೆ, ಬಸವನಹಳ್ಳಿ ಮುಖ್ಯ ರಸ್ತೆ, ಹನುಮಂತಪ್ಪ ವೃತ್ತ, ಕೆಎಂ ರಸ್ತೆ ಮೂಲಕ ಕೋಟೆ ಕೆರೆಗೆ ತಲುಪಿತು.
ಹಿಂದೂ ಮಹಾ ಗಣಪತಿ ಶೋಭಾಯಾತ್ರೆ ಯಲ್ಲಿ ರಾಜ ಗಾಂಭೀರದಿಂದ ಕಂಗೊಳಿಸಿದ ಶ್ರೀರಾಮ
ಚಿಕ್ಕಮಗಳೂರಿನ ಬ್ರಹತ್ ಶೋಭೆ ಯಾತ್ರೆ ಯಲ್ಲಿ ಹಿಂದೂಗಳ ಸಂಕೇತ ಶ್ರೀರಾಮನ ವಿಗ್ರವಾ ವನ್ನು ಚಿಕ್ಕಮಗಳೂರಿನ ಸಾರ್ವಜನಿಕರು ಅದ್ದೂರಿಯಾಗಿ ಶ್ರೀರಾಮನ ಸ್ಮರಿಸುತ್ತ ಜೈ ಶ್ರೀರಾಮ್ ಯಂದು ಕೂಗಿ ಹಿಂದೂ ಮಹಾ ಗಣಪತಿಯ ವಿಸರ್ಜನೆಗೆ ಮುಂದಾದರು
ಬಸವನಹಳ್ಳಿ ಓಂಕಾರೇಶ್ವರ ದೇವಸ್ಥಾನದಿಂದ ಹೊರಟ ಮೆರವಣಿಗೆಯಾ ನಂತರ ಅದ್ದೂರಿಯಾಗಿ ಸಾಗಿ DJ ಗೆ ಕುಣಿದು ಕುಪ್ಪಳಿಸಿ ಮತ್ತೆ ಇನ್ನಿತರ ವಾದ್ಯ ಗಳಿಗೆ ಕುಣಿದು ಕೆಎಂ ರಸ್ತೆ ಮೂಲಕ ಕೋಟೆ ಕೆರೆಗೆ ತಲುಪಿತು. ನಂತರ ಸುಮಾರು ರಾತ್ರಿ ೧ ಗಂಟೆಗೆ ಪೊಲೀಸ್ ರವರ ನಿಯೋಜನೆಯ ಮೂಲಕ ಗಣೇಶನನ್ನು ಕೋಟೆಯಾ ಕೆರೆಗೆ ವಿಸರ್ಜನೆ ಮಾಡಲಾಗಿತು.